Bio Energy Karnataka > Blog > ಜೈವಿಕ ಇಂಧನಗಳು

ಜೈವಿಕ ಇಂಧನಗಳು

ರಾಷ್ಟ್ರದ ಅಭಿವೃದ್ಧಿಯ ಮಾನದಂಡಗಳಲ್ಲಿ ಸುರಕ್ಫಿತ ಇಂಧನದ ಬಳಕೆ, ದೇಶದ ಇಂಧನ ಸುರಕ್ಷತೆ ಮತ್ತು ಇಂಧನ ಸ್ವಾವಲಂಬನೆಯ ಮಟ್ಟ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಭಾರತ ಒಂದು ಸುಭದ್ರ ಹಾಗೂ ಇಂಧನ ಸ್ವಾವಲಂಬಿ ರಾಷ್ಟ್ರವಾಗಬೇಕಾದರೆ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆಯ ಅಗತ್ಯವಿದೆ. ಭಾರತದಂತಹ ಅಭಿವೃದ್ದಿ ಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಇಂಧನ ಸಮಸ್ಯೆ ಬಹಳ ಸಂಕೀರ್ಣವಾದುದು. ದಿನದಿಂದ ದಿನಕ್ಕೆ ಹೆಚ್ಚುತ್ತಿರವ ಕಚ್ಚಾ ತೈಲದ ಬಳಕೆ ಬೇಡಿಕೆಗಳ ಜೊತೆ-ಜೊತೆಗೆ ವಿದೇಶಿ ಅವಲಂಬನೆ, ವಿದೇಶಗಳಿಂದ ಪೂರೈಸಲ್ಪಡುವ ಪೆಟ್ರೋಲಿಯಂ ಕಚ್ಚಾ ತೈಲದ ಅಸಮರ್ಪಕ ಪೂರೈಕೆ ಮತ್ತು ಬೆಲೆಯಲ್ಲಿನ ಏರಿಳಿತ-ಅಸ್ಥಿರತೆಯಿಂದ ದೇಶದ ಆರ್ಥಿಕತೆಯ ಮೇಲಾಗುವ ವ್ಯತಿರಿಕ್ತ ಪರಿಣಾಮ, ಪೆಟ್ರೋಲಿಯಂ ಕಚ್ಚಾ ತೈಲದ ಬಳಕೆಯಿಂದ ಮಾನವ, ಪರಿಸರ, ಮತ್ತು ವಿವಿದ ಜೀವಿಗಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಊಹಿಸಿಕೊಂಡೆರೆ ನಿಜಕ್ಕೂ ನಾಗರೀಕರ, ಅದರಲ್ಲೂ ಮುಂದಿನ ಪೀಳಿಗೆಯ ಜೀವನ ಅತ್ಯಂತ ಭಯಾನಕವೆನಿಸುತ್ತದೆ. ಆದ್ದರಿಂದ ಸುರಕ್ಷಿತ ಇಂಧನ ಬಳಕೆ ನೀತಿ ಮತ್ತು ಇಂದನ ಉತ್ಪಾದನೆಯಲ್ಲಿ ಭಾರತ ಸ್ವಾವಲಭಿಯಾಗಬೇಕಾದರೆ ಪೆಟ್ರೋಲಿಯಂ ತೈಲಕ್ಕೆ ಪರ್ಯಾಯವಾಗಿ ನೈಸರ್ಗಿಕವಾಗಿ ದೊರೆಯುವ ಪರಿಸರಕ್ಕೆ ಮತ್ತು ಜೀವ ಜಗತ್ತಿನ ಆರೋಗ್ಯ ಮತ್ತು ಉಳಿವಿನ ಮೇಲೆ ಯಾವುದೇ ಹಾನಿಯುಂಟುಮಾಡದ ವಿವಿಧ ತೈಲಮೂಲ ಇಂಧನಗಳ ಉತ್ಪಾಧನೆ, ಉಪಯೋಗ, ಬಳಕೆ ಮತ್ತು ಅವುಗಳ ಅನ್ವೇಷಣೆ ಅತ್ಯಂತ ಅಗತ್ಯವಾದ ಪ್ರಮುಖ ರಾಷ್ಟ್ರಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಸರದಿಂದಲೇ ದೊರೆಯುವ ಪೆಟ್ರೋಲಿಯುಂ ಮೂಲವಲ್ಲದ ಇಂಧನಗಳಾದ ಜೈವಿಕ ಇಂದನಗಳು ಅತ್ಯಂತ ಪರಿಣಾಮಕಾರಿಯಾಗಿವೆ.

ಜೈವಿಕ ಇಂಧನದ ಪ್ರಯೋಜನಗಳು:

ಜೈವಿಕ ಇಂಧನದ ಪ್ರಯೋಜನಗಳು ಹಲವಾರು, ದೇಶದ ಆರ್ಥಿಕತೆಗೆ ಮತ್ತು ಪರಿಸರಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ಪ್ರಯೋಜನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿರ್ದಿಷ್ಟವಾಗಿ ೩ ರೀತಿಯಲ್ಲಿ ತಿಳಿದುಕೊಳ್ಳಬಹುದಾಗಿದೆ.

ಪರಿಸರಕ್ಕಾಗುವ ಪ್ರಯೋಜನಗಳು

೧. ಜೈವಿಕ ಇಂಧನದ ಬಳಕೆಯಿಂದಾಗಿ ವಾಹನದಿಂದ ಬಿಡುಗಡೆಯಾಗುವ ಹೈಡ್ರೋಕಾರ್ಬನ್, ಕಾರ್ಬನ್ ಮಾನಾಕ್ಸೈಡ್ ಇತ್ಯಾದಿಗಳ ಪ್ರಮಾಣವು ವಾತಾವರಣದಲ್ಲಿ ಸಾಕಷ್ಟು ಕಡಿಮೆಯಾಗುವುದು.

೨. ಜೈವಿಕ ಇಂಧನದಲ್ಲಿ ಗಂಧಕ ಇರುವುದಿಲ್ಲ, ವಾಸನಾರಹಿತವಿದ್ದು, ಪ್ರತಿಶತ ೧೦ ರಷ್ಟು ಆಮ್ಲಜನಕ ಇರುವುದರಿಂದ ಇಂಧನದ ಪೂರ್ತಿ ಸುಡುವಿಕೆಗೆ ಸಹಕಾರಿಯಾಗುತ್ತದೆ. ಇದರಲ್ಲಿಯ ಹೆಚ್ಚಿನ ಸಂಖ್ಯೆಯ ಸಟೇನ್ (Cetane) ಇಂಧನ ಸುಡುವಿಕೆಯ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ

೩. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿರುವ ಹಸಿರು ಮನೆಗಳ ಅನಿಲಗಳಂತಿರದೆ, ಜೈವಿಕ ಇಂಧನವು ತಟಸ್ಥ ವಸ್ತುವಾಗಿದ್ದು, ಪರಿಸರ ಸ್ನೇಹಿಯಾಗಿರತ್ತದೆ.

೪. ಜೈವಿಕ ಇಂಧನಗಳು ಕಾರ್ಬೋಹೈಡ್ರೇಟ್ (ಎಥೆನಾಲ್) ಅಥವಾ ತೈಲ (ಬಯೋ ಡೀಸಲ್) ಮೂಲದ್ದಾಗಿರುತ್ತವೆ. ಕಾಬೋಹೈಡ್ರೇಟ್ (ಎಥೆನಾಲ್) ಮೂಲದ ಜೈವಿಕ ಇಂಧನವನ್ನು ಅತೀ ಸುಲಭವಾಗಿ ಬೆಳೆದು ವಾಣಿಜ್ಯೀಕರಣಗೊಳಿಸಬಹುದಾಗಿದೆ. ಆದರೆ ಆಹಾರಧಾನ್ಯ ಉತ್ಪಾದನೆಗೆ ಆದ್ಯತೆ ಇರುವುದರಿಂದ ಕೃಷಿ ಉತ್ಪಾದಕ ಭೂ ಬಳಕೆಗೆ ಮಿತಿ ಇದೆ, ಆದರೆ ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಯತ್ಥೇಚ್ಚವಾಗಿ ತೈಲ (ಬಯೋ ಡೀಸಲ್) ಮೂಲದ ಇಂಧನ ಉತ್ಪಾದನಾ ಬೆಳೆಗೆ ಬಳಸುವುದು ಆಕರ್ಷಣೀಯವಾಗಿದೆ.

೫. ಜೈವಿಕ ತ್ಯಾಜ್ಯದಿಂದ ಉತ್ಪಾದಿಸಿದ ಜೈವಿಕ ಇಂಧನವನ್ನು ದ್ರವರೂಪದ ಅಥವಾ ಅನಿಲ ರೂಪದ ಇಂಧನ ಎಂದು ವ್ಯಾಖ್ಯಾನಿಸಲಾಗಿದೆ. ಇದನ್ನು ಡೀಜಲ್, ಪೆಟ್ರೋಲ್ ಅಥವಾ ಸಾಂಪ್ರದಾಯಿಕ ಇಂಧನಕ್ಕೆ ಬದಲಿ ಆಗಿ ಅಥವಾ ಅವುಗಳ ಮಿಶ್ರವಿವಿಧ ಮಟ್ಟಗಳಅದರೊಂದಿಗೆ ಯಂತ್ರಗಳಲ್ಲಿ ಬಳಸಬಹುದು.

೬. ಶೇ ೨೦ ರಷ್ಟು ಮಿಶ್ರಣದ ಜೈವಿಕ ಇಂಧನ ಉಪಯೋಗ ಮೋಟಾರ ವಾಹನದ ಯಂತ್ರದಲ್ಲಿ ಅತೀ ಕನಿಷ್ಠ ಬದಲಾವಣೆ ತರಬಹುದು ಅಥವಾ ಯಾವುದೇ ಬದಲಾವಣೆಯ ಅವಶ್ಯಕತೆ ತರುವುದಿಲ್ಲ. ಶೇ.೨೦ ಕ್ಕಿಂತ ಹೆಚ್ಚಿನ ಜೈವಿಕ ಇಂಧನದ ಮಿಶ್ರಣವು ಯಂತ್ರದಲ್ಲಿ ಅತ್ಯಲ್ಪ ಬದಲಾವಣೆ ಅವಶ್ಯಕತೆ ತರಬಹುದು.

೭. ಈ ಇಂಧನಗಳ ಉಪಯೋಗದಿಂದ ಪರಿಸರಕ್ಕೆ ಮತ್ತು ಜೀವಜಗತ್ತಿನ ಮೇಲೆ ಯಾವುದೇ ಕೆಟ್ಟ ಪರಿಣಾಮಗಳಾಗುವುದಿಲ್ಲ ಬದಲಿಗೆ ಸುರಕ್ಷಿತ ಇಂಧನಗಳಾಗಿ ಆರ್ಥಿಕ ವ್ಯವಸ್ಥೆಗೆ ಮತ್ತು ದೇಶದ ಇಂಧನ ಸುರಕ್ಫತೆಗೆ ಭದ್ರಬುನಾದಿಯಾಗುತ್ತವೆ.

ಆರ್ಥಿಕ ಪ್ರಯೋಜನಗಳು

೧. ದೇಶದ ಗ್ರಾಮೀಣ ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ

೨. ವಿದೇಶಿ ವಿನಿಮಯದ ಉಳಿಕೆ

೩. ಕಡಿಮೆ ವೆಚ್ಚದಲ್ಲಿ ಡೀಸೆಲ್ ತಯಾರಿಕೆ ಪೂರೈಕೆ ಮತ್ತು ಬಳಸಬಹುದು, ಜೈವಿಕ ಇಂಧನ –ಎಣ್ಣೆಗಳು ಹಾಲ್ಕೋಹಾಲ್ ನಲ್ಲಿ ಸುಲಭವಾಗಿ ಕರಗಬಲ್ಲ ಎಣ್ಣೆಗಳಾಗಿರುವುದರಿಂದ ಕಡಿಮೆ ವೆಚ್ಚದಲ್ಲಿ ಡೀಸೆಲ್ ತಯಾರಿಸಬಹುದು.

೪. ಕೃಷಿ -ಸಾವಯವ ಗೊಬ್ಬರವಾಗಿ.

೫. ಆಹಾರ –ಆಹಾರ ಪದಾರ್ಥಗಳ ಪ್ಯಾಕೇಜಿಂಗ್ ನಲ್ಲಿ ಹಾಗೂ ಫ್ಲೇವರಿಂಗ್ಸ್.

೬. ಬಟ್ಟೆ ಉತ್ಪಾದನೆ ರಾಸಾಯನಿಕವಾಗಿ-ಬಣ್ಣ ಮಾಡಲು, ಅಂತಿಮವಾಗಿ ಬಟ್ಟೆ ಸಿದ್ದಗೊಳಿಸುವಲ್ಲಿ.

೭. ಕಾಗದ-ನೀರಿನಿಂದ ಹಾಳಾಗವುದನ್ನು ತಡೆಯಲು ಸಿದ್ದಪಡಿಸಲಾಗುವ ಕಾಗದ ತಯಾರಿಕೆಯಲ್ಲಿ ಹಾಗೂ ಫ್ಲೈ ಪೇಪರುಗಳಲ್ಲಿ.

೮. ಪ್ಲಾಸ್ಟಿಕ್, ಗ್ಲಾಸ್ ಮತ್ತು ರಬ್ಬರ್-ಪ್ಲಾಸ್ಟಿಕ್ ಫಿಲ್ಮ್ ತಯಾರಿಕೆಯಲ್ಲಿ, ಪಾಲಿಯಾಲ್‌ಗಳಲ್ಲಿ, ಕೃತಕ ರೆಸೀನ್ ಗಳಲ್ಲಿ, ಗುಂಡು ನಿರೋಧಕ ಗಾಜಿನ ತಯಾರಿಕೆಯಲ್ಲಿ ಹಾಗೂ ಫೈಬರ್ ಆಪ್ಟಿಕ್ಸಗಳಲ್ಲಿ.

೯. ಪರಿಮಳ ಹಾಗೂ ಸೌಂದರ್ಯವರ್ಧಕಗಳಲ್ಲಿ-ಲಿಪ್‌ಸ್ಟಿಕ್, ಶ್ಯಾಂಪೂ, ಪಾಲೀಶ್‌ಗಳು, ಕೇಶವರ್ಧಕ ಮತ್ತು ಸುಗಂಧದ್ರವ್ಯಗಳ ತಯಾರಿಕೆಯಲ್ಲಿ.

೧೦. ಎಲೆಕ್ಟ್ರಾನಿಕ್ಸ್ ಮತ್ತು ಟೆಲೆಕಮ್ಯೂನಿಕೇಶನ್ – ಪಾಲಿಯೂರಿಇಥೇನ್ ತಯಾರಿಕೆಯಲ್ಲಿ, ಇನ್ಸೂಲೇಶನ್ ಮಟೆರಿಯಲ್ಸ್‌ನಲ್ಲಿ.

೧೧. ಫಾರ ಮಾಸ್ಯೂಟಿಕಲ್ಸ್-ತಲೆ ಹೊಟ್ಟು ನಿವಾರಣೆಯಲ್ಲಿ, ಲಾಕ್ಸೇಟಿವ್ ಮತ್ತು ಫರ್‌ಗೇಟೀವ್ಸ್‌ಗಳ ತಯಾರಿಕೆಯಲ್ಲಿ.

೧೨. ಬಣ್ಣ ಶಾಯಿ ತಯಾರಿಕೆಯಲ್ಲಿ-ಶಾಯಿ, ವಾರ್ನಿಶ್‌ಗಳು, ಲೆಕಾರ್‌ಸ್ ಗಳು, ಹಾಗೂ ಅಂಟು ನಿವಾರಣೆಗಳಲ್ಲಿ ಅಲ್ಲದೇ ನ್ಯೂಕ್ಲಿಯರ್ ರಿಯಾಕ್ಟರ್‌ಗಳ ವಿಶೇಷ ಬಣ್ಣವಾಗಿ ಬಳಸುತ್ತಾರೆ.

೧೩. ಲೂಬ್ರಿಕೆಂಟ್ಸ್‌ಗಳಲ್ಲಿ-ಲೂಬ್ರಿಕೇಟಿಂಗ್ ಗ್ರೀಸ್, ರೇಸಿಂಗ್ ಕಾರ್ ಲೂಬಿಕೆಂಟ್ಸ್‌ಗಳಲ್ಲಿ ಅತಿ ಕಡಿಮೆ ತಾಪಮಾನವಿರುವ ರಾಕೆಟ್‌ಗಳಲ್ಲಿ, ಜಟ್, ಹಾಗೂ ಮಿಮಾನಗಳ ಲೂಬಿಕೆಂಟ್ಸ್‌ಗಳಲ್ಲಿ ಹಾಗೂ ಹೈಡ್ರಾಲಕ್ ಫೂಯಿಡ್ ಆಗಿ ಬಳಸಲಾಗುವುದು.

Leave a Reply