ರೈತರಿಗಾಗಿ

ಜೈವಿಕ ಇಂಧನದ ಲಾಭಗಳು

ರೈತರಿಗೆ ಆಗುವ ಪ್ರಯೋಜನಗಳು ಜೈವಿಕ ಇಂಧನ ಬೀಜಗಳಿಂದ ನಿರಂತರ ಹೆಚ್ಚುವರಿ ಆದಾಯ. ಬೀಜ ಸಂಸ್ಕರಣದ ನಂತರ ದೊರಕುವ ಹಿಂಡಿಯಿಂದ ಮತ್ತು ಹಸಿರೆಲೆ ಗೊಬ್ಬರದಿಂದ ಕೃಷಿ ಜಮೀನಿಗೆ ಅಗತ್ಯವಿರುವ ಸಾವಯವ ಗೊಬ್ಬರದ ಲಭ್ಯತೆ. ಔಷಧೀಯ ಗುಣ ಮತ್ತು ಬೆಳೆಗಳಿಗೆ ತಗಲುವ ರೋಗ ಮತ್ತು ಕೀಟ ನಿಯಂತ್ರಕ ಗುಣದ ಲಾಭ. ಹೂ ಬಿಡುವ ಸಮಯದಲ್ಲಿ ಜೇನು ಕೃಷಿಗೆ ಸಹಾಯಕಾರಿ. ಜಮೀನಿನ ಫಲವತ್ತಾದ ಮೇಲ್ಮಣ್ಣಿನ ಭೂ ಸವಕಳಿ ತಡೆಗಟ್ಟವುದು. ಈ ಸಸಿಗಳ ಬೇರುಗಳ ಮುಖಾಂತರ ಭೂಮಿಗೆ ಹೆಚ್ಚುವರಿ ಸಾರಜನಕವನ್ನು ಒದಗಸುವುದು. ಕಸಿ […]

ಜೈವಿಕ ಇಂಧನಗಳ ತಾಂತ್ರಿಕತೆ

ತಲತಲಾಂತರದಿಂದ ಹೊಂಗೆ, ಹಿಪ್ಪೆ, ಬೇವಿನ ಬೀಜಗಳಿಂದ ಗಾಣದಲ್ಲಿ ಎಣ್ಣೆ ತೆಗೆದು ವಿವಿಧ ಕೆಲಸಗಳಿಗೆ ಉಪಯೋಗಿಸಲಾಗುತ್ತಿದೆ. ಅದರಲ್ಲಿ ದೀಪಗಳನ್ನು ಉರಿಸುವುದು ಒಂದು ಮುಖ್ಯ ಉಪಯೋಗವಾಗಿತ್ತು. ಈಗಲೂ ಸಹ ಹಳ್ಳಿಗಳಲ್ಲಿ ರೈತರು ತಮ್ಮ ಹೊಲಗದ್ದೆಯ ಬದುಗಳಲ್ಲಿ, ಬೆಳೆದ ಹೊಂಗೆ, ಹಿಪ್ಪೆ, ಬೇವಿನ ಬೀಜಗಳನ್ನು ಸಂಗ್ರಹಿಸಿ, ಹತ್ತಿರದಲ್ಲಿರುವ ಗಾಣದಲ್ಲಿ ಎಣ್ಣೆಯನ್ನು ತೆಗೆದು ವಿವಿಧ ಬಗೆಯಲ್ಲಿ ಉಪಯೋಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಎಣ್ಣೆಗಳನ್ನು ಸ್ವಲ್ಪ ಮಟ್ಟಿಗೆ ಶುದ್ಧೀಕರಿಸಿ, ಟ್ರಾಕ್ಟರ್, ನೀರೆತ್ತುವ ಪಂಪುಗಳ ಇಂಜಿನ್ ಓಡಿಸಲು ಹಾಗೂ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿದೆ. ಗಾಣದಲ್ಲಿ […]

ಮಾರುಕಟ್ಟೆ ವ್ಯವಸ್ಥೆ

ಜೈವಿಕ ಇಂಧನ ಮರದ ಬೀಜಗಳಿಗೆ ಪ್ರಸ್ತುತ ನಿಗದಿತ ಬೆಲೆ ಇಲ್ಲ. ಮಾರುಕಟ್ಟೆಯಲ್ಲಿ ಬೀಜಗಳ ಬೆಲೆಯನ್ನು ರೈಕೆ ಹಾಗೂ ಬೇಡಿಕೆಯ ಆಧಾರದ ಮೇಲೆ ನಿಗದಿಪಡಿಸಲಾಗುವುದು. ಆದರೆ, ಮುಂದಿನ ದಿನಗಳಲ್ಲಿ ಎಣ್ಣೆ ಬೀಜಗಳಿಗೆ, ಜೈವಿಕ ಇಂಧನ ಮತ್ತು ಜೈವಿಕ ಇಂಧನ ಉಪ-ಉತ್ಪನ್ನಗಳಿಗೆ ನಿಶ್ಚಿತವಾದ ಮಾರುಕಟ್ಟೆ ನಿರ್ಮಾಣವಾಗುವುದರಲ್ಲಿ  ಯಾವ ಸಂಶಯವೂ ಇಲ್ಲ. ಆದುದರಿಂದ ಈ ನಿಟ್ಟಿನಲ್ಲಿ ಸಂಟಿತವಾದ ಬೀಜಸಂಗ್ರಹಣಾ ಜಾಲ ಹಳ್ಳಿಗಳಲ್ಲಿ ಪ್ರಾರಂಭವಾಗಬೇಕಾಗಿದೆ. ಈ ಸಂಗ್ರಹಣಾ ಜಾಲವು ಈಗ ಪ್ರಚಲಿತದಲ್ಲಿರುವ ಹಾಲು ಒಕ್ಕೂಟದ ಮಾದರಿಯಲ್ಲಿ ಕೆಲಸ ಮಾಡಬಹುದು. ಹೀಗೆ ಸಂಗ್ರಹಿಸಿದ ಜೈವಿಕ […]

ರೈತರ ಪಾಲ್ಗೊಳ್ಳುವಿಕೆ ಮತ್ತು ಅದರಿಂದ ಅವರಿಗಾಗುವ ಲಾಭಗಳು

ನಮ್ಮ ದೇಶದಲ್ಲಿ ಜೈವಿಕ ಇಂಧನ ಉತ್ಪಾದನೆಗಾಗಿ ಬೇಕಾದ ಸಸ್ಯಗಳನ್ನು ಬೆಳೆಸಲು ಪಶ್ಚಿಮ ಟ್ಟಗಳು ಮತ್ತು ಮೈದಾನ ಪ್ರದೇಶಗಳ ಲಭ್ಯವಿದೆ.  ಅಲ್ಲದೇ ಈ ಸಸ್ಯಗಳನ್ನು ರೈತರು ಜಮೀನಿನ ಬದುಗಳಲ್ಲಿ, ಹಿತ್ತಲು ಹಾಗೂ ಬಂಜರು ಭೂಮಿಯಲ್ಲಿ ಬೆಳೆಯಬಹುದಾಗಿದೆ.  ಕರ್ನಾಟಕ ರಾಜ್ಯದಲ್ಲಿ ಸುಮಾರು 13.5 ಲಕ್ಷ ಹೆಕ್ಟೇರು ಬಂಜರು/ಅರೆ ಬಂಜರು ಭೂಮಿ ಲಭ್ಯವಿದೆ ಎಂದು ಅಂದಾಜು ಮಾಡಲಾಗಿದೆ. ನೈಸರ್ಗಿಕವಾಗಿ ಬೆಳೆಯುವ ಮರಗಿಡಗಳಿಂದ ದೊರೆಯುವ ಬೀಜಗಳಿಂದ ಬರುವ ಎಣ್ಣೆಯನ್ನು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಬಹುದಾಗಿದೆ. ನಮ್ಮ ದೇಶದಲ್ಲಿ 150ಕ್ಕಿಂತಲೂ ಹೆಚ್ಚು ಮರಗಳಿಂದ ದೊರೆಯುವ […]