Bio Energy Karnataka > ಯೋಜನೆಗಳು > ಕ್ಲೋನಲ್ ಆರ್ಚರ್ಡ್ಸ್

ಕ್ಲೋನಲ್ ಆರ್ಚರ್ಡ್ಸ್

ಕ್ಲೋನಲ್  ಆರ್ಚರ್ಡ್ಸ್­ಗಳ ನಿರ್ಮಾಣ ಹಾಗೂ ಅಭಿವೃದ್ಧಿ : 

ರಾಜ್ಯದ ವಿವಿಧ ಹತ್ತು ಸ್ಥಳಗಳಲ್ಲಿ ಕಸಿ ಮಾಡಿದ ತಳಿಗಳ ಅಭಿವೃದ್ಧಿ ಹಾಗೂ ಸ್ಥಳೀಯ ಜೈವಿಕ ಇಂಧನ ಮರಗಳ ಅಭಿವೃದ್ಧಿಗಾಗಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ರಾಜ್ಯದಲ್ಲಿ ಕ್ಲೋನಲ್ ಆರ್ಚರ್ಡ್ಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಲಭ್ಯವಿರುವ ಉತ್ತಮ ತಳಿಯ ಜೈವಿಕ ಇಂಧನ ಮರಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮರೂಬ, ಲಕ್ಷೀತರು, ಇತ್ಯಾದಿಗಳ ಸಂರಕ್ಷಣೆ ಮತ್ತು ಅಧಿಕ ಬೀಜ ನೀಡುವ ತಳಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಜೈವಿಕ ಇಂಧನದ ಕ್ಲೋನಲ್ ಆರ್ಚರ್ಡ್ಗಳನ್ನು ನಿರ್ಮಿಸಲಾಗುತ್ತಿದೆ.  ಈ ಆರ್ಚರ್ಡ್ಗಳಲ್ಲಿ ವಿವಿಧ ತಾಯಿ ಮರಗಳಿಂದ ಕಸಿ ಮಾಡಿದ ತಳಿಗಳನ್ನು  ಆಭಿವೃದ್ಧಿಪಡಿಸಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ನೀಡುವ ಜೈವಿಕ ಇಂಧನ ತಳಿಗಳನ್ನು ಅಭಿವೃದ್ಧಿಪಡಿಸಲಾಗುವುದು.  ರಾಜ್ಯದ ಅರಣ್ಯ ಇಲಾಖೆಯ ಸಂಶೋಧನೆ ಮತ್ತು ಬಳಕೆ ವಿಭಾಗದ ವ್ಯಾಪ್ತಿಯಲ್ಲಿರುವ ಎಲ್ಲಾ ಕೇಂದ್ರಗಳಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ನೆರವಿನೊಂದಿಗೆ ಕ್ಲೋನಲ್ ಆರ್ಚರ್ಡ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರತಿ ಕ್ಲೋನಲ್ ಆರ್ಚರ್ಡ್ಗಳಲ್ಲಿ ಕನಿಷ್ಠ 25 ಹೆಕ್ಟೇರ್ ಭೂ ಪ್ರದೇಶದಲ್ಲಿ ಕೈಗೊಳ್ಳಲು ಮಂಡಳಿ ಉದ್ದೇಶಿಸಿದೆ. ರಾಜ್ಯದ ಹತ್ತು ವಿವಿಧ ಸ್ಥಳಗಳಲ್ಲಿ ಇಂತಹ ಕ್ಲೋನಲ್ ಆರ್ಚರ್ಡ್ಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಅವುಗಳ ವಿವರ ಹೀಗಿದೆ.

P-10 P-11

ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕ್ಲೋನಲ್ ಆರ್ಚಡಗಳ ವಿವರ :

ಕ್ರ.ಸಂ ಸಂಶೋಧನಾ ವಿಭಾಗ ಕ್ಲೋನಲ್ ಆರ್ಚರ್ಡನ ಸ್ಥಳಗಳು
1 ಧಾರವಾಡ ವಿಭಾಗ 1. ಮುತ್ತಲಗೆರೆ, ಬಾದಾಮಿ ತಾ||, ಬಾಗಲಕೋಟೆ ಜಿಲ್ಲೆ.

2. ಯರಗರ್ಜಿವಿ, ಸೌಂದತ್ತಿ ತಾ||, ಬೆಳಗಾವಿ ಜಿಲ್ಲೆ.

3. ಅಡವಿ ಸೋಮಾಪುರ, ಶಿಗಾವಿ ತಾ||, ಹಾವೇರಿ ಜಿಲ್ಲೆ.

4. ಮಲ್ಲಾಪುರ, ತಾಲ್ಲೂಕು ಮತ್ತು ಜಿಲ್ಲೆ, ಶಿವಮೊಗ್ಗ.

2 ಬಳ್ಳಾರಿ ವಿಭಾಗ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣ, ನೇರಳಗುಂಟೆ ಗ್ರಾಮ, ಚಳ್ಳಕೆರೆ ತಾ||, ಚಿತ್ರದುರ್ಗ ಜಿಲ್ಲೆ.
3 ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು. ಹೊಳೆನರಸೀಪುರ, ಹಾಸನ ಜಿಲ್ಲೆ.
4 ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ. ಗುಲಬರ್ಗಾ ವಿಶ್ವವಿದ್ಯಾಲಯದ ಆವರಣ.
5 ಮಡಿಕೇರಿ ವಿಭಾಗ. ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ.
6 ಬೆಂಗಳೂರು ವಿಭಾಗ. ಅರಣ್ಯ ಇಲಾಖೆ, ಸಂಶೋಧನಾ ಕೇಂದ್ರ. ಹೊಸಕೋಟೆ.
7 ಗುಲಬರ್ಗಾ ವಿಭಾಗ. ಯಾದಗಿರಿ.