Bio Energy Karnataka > ಯೋಜನೆಗಳು > ಹೊಂಬೆಳಕು ಮತ್ತು ಹೊಂಗಿರಣ

ಹೊಂಬೆಳಕು ಮತ್ತು ಹೊಂಗಿರಣ

ಹೊಂಬೆಳಕು ಯೋಜನೆ :

ಜೈವಿಕ ಇಂಧನ ಉತ್ಪನ್ನ ಹಾಗೂ ಬಳಕೆಯ ಕ್ಷೇತ್ರದಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ನಿರ್ಣಾಯಕವೆನಿಸಿದೆ. ಈ ನಿಟ್ಟಿನಲ್ಲಿ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರನ್ನು ಬೀಜ ಸಂಗ್ರಹಣೆ, ಸಂಸ್ಕರಣೆ, ಹಾಗೂ ಮೌಲ್ಯವರ್ಧನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೊಂಬೆಳಕು ೨೦೧೨-೧೩ನೇ ಸಾಲಿನಿಂದ ಪ್ರಾರಂಭಿಸಿದೆ. ಯೋಜನೆಯಡಿ ಆಯ್ಕೆಯಾಗಲಿರುವ ಮಹಿಳಾ ಸ್ವ ಸಹಾಯ ಸಂಘಕ್ಕೆ ಪ್ರತಿ ದಿನ ಘಂಟೆಗೆ ೨೫ ರಿಂದ ೩೦ ಕೆ.ಜಿ. ಬೀಜ ಅರೆಯುವ ಸಾಮರ್ಥ್ಯದ ತೈಲೋತ್ಪಾದನ ಯಂತ್ರ ನೀಡುವುದರೊಂದಿಗೆ ಅಗತ್ಯ ತಾಂತ್ರಿಕ ತರಬೇತಿ ಮಂಡಳಿಯಿಂದ ನೀಡಲಾಗುವುದು.

ಸ್ಥಳೀಯವಾಗಿ ಬೀಜ ಸಂಗ್ರಹಣೆ ಮಾಡಿ ತೈಲೋತ್ಪಾದನೆ ನಂತರ ದೊರೆಯುವ ಹಿಂಡಿಯನ್ನು ಗೊಬ್ಬರವಾಗಿ ಮಾರಾಟಮಾಡುವುದರೊಂದಿಗೆ ಉತ್ಪಾದಿತ ತೈಲದಿಂದ ಸ್ಥಳೀಯ ಇಂಧನದ ಬೇಡಿಕೆ ಪೂರೈಸಲಾಗುವುದು. ಇದರಿಂದ ಗ್ರಾಮೀಣ ಜನತೆಗೆ ಉಪ ಉತ್ಪನ್ನಗಳ ಪ್ರಯೋಜನದೊಂದಿಗೆ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದು.

ಹೊಂಗಿರಣ ಯೋಜನೆ :

ಜೈವಿಕ ಇಂಧನ ಕ್ಷೇತ್ರದ ಉತ್ಪನ್ನಗಳೆಲ್ಲವನ್ನು ಒಂದು ಸಊರಿನಡಿ ದೊರೆಯುವಂತಾಗಲು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸ್ವಯಂ ಸೇವಾಸಂಸ್ಥೆಗಳನ್ನು ತೊಡಗಿಸಿಕೊಂಡು ಜೈವಿಕ ಇಂಧನ ಮಾರಾಟ ಮಳಗೆಗಳನ್ನು ಹೊಂಗಿರಣ ಯೋಜನೆಯಡಿ ಹಮ್ಮಿಕೊಂಡಿದೆ. ಈ ಮಳಿಗೆಯಿಂದ ಬೀಜ ಸಂಗ್ರಹಣೆ, ತೈಲ ಹಾಗೂ ಹಿಂಡಿಯ ಮಾರಾಟ, ಉಪ ಉತ್ಪನ್ನಗಳ ಮಾರಾಟ ಇತ್ಯಾದಿಗಳೊಂದಿಗೆ ಜೈವಿಕ ಇಂಧನ ಕ್ಷೇತ್ರದ ಸಮಗ್ರ ಮಾಹಿತಿ ಸಾರ್ವಜನಕರಿಗೆ ನೀಡಲು ನೆರವಾಗುವುದು. ಈ ಮಾರಾಟ ಮಳಿಗೆಯ ನಿರ್ಮಾಣಕ್ಕಾಗಿ ಮಂಡಳಿಯಿಂದ ಆರ್ಥಿಕ ನೆರವು ನೀಡಲಾಗವುದು.