Bio Energy Karnataka > ಯೋಜನೆಗಳು > ಜೈವಿಕ ಇಂಧನ ಉದ್ಯಾನ

ಜೈವಿಕ ಇಂಧನ ಉದ್ಯಾನ

ಜೈವಿಕ ಇಂಧನ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ,  ರೈತರಿಗಾಗಿ, ಜೈವಿಕ ಇಂಧನ ಉತ್ಪಾದನೆ ಹಾಗೂ ಬಳಕೆ ಅಭಿವೃದ್ಧಿ ಗೊಳಿಸಲು ಮತ್ತು ಈ ಕ್ಷೇತ್ರದ ಸಂಶೋಧನಾ ಕಾರ್ಯಗಳಿಗೆ ನೆರವಾಗಲು ಜೈವಿಕ ಇಂಧನ ಉದ್ಯಾನಗಳ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಚಾಲನೆ ನೀಡಿದೆ.  ರಾಜ್ಯದ ವಿವಿಧ ಪ್ರಾಂತ್ಯಗಳಲ್ಲಿ ಜೈವಿಕ ಇಂಧನ ಉದ್ಯಾನಗಳ ನಿರ್ಮಾಣ ಕೈಗೊಳ್ಳಲಾಗುತ್ತಿದೆ.  ಜೈವಿಕ ಇಂಧನ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ,  ರೈತರಿಗಾಗಿ, ಜೈವಿಕ ಇಂಧನ ಉತ್ಪಾದನೆ ಹಾಗೂ ಬಳಕೆ ಅಭಿವೃದ್ಧಿ ಗೊಳಿಸಲು ಮತ್ತು ಈ ಕ್ಷೇತ್ರದ ಸಂಶೋಧನಾ ಕಾರ್ಯಗಳಿಗೆ ನೆರವಾಗಲು ಜೈವಿಕ ಇಂಧನ ಉದ್ಯಾನಗಳ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಚಾಲನೆ ನೀಡಿದೆ.  ರಾಜ್ಯದ ವಿವಿಧ ಪ್ರಾಂತ್ಯಗಳಲ್ಲಿ ಜೈವಿಕ ಇಂಧನ ಉದ್ಯಾನಗಳ ನಿರ್ಮಾಣ ಕೈಗೊಳ್ಳಲಾಗುತ್ತಿದೆ.

೧. ಜೈವಿಕ ಇಂಧನ ಉದ್ಯಾನ, ಮಡೇನೂರು, ಹಾಸನ: ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದ ವ್ಯಾಪ್ತಿಗೊಳಪಡುವ ಹಾಸನ ಜಿಲ್ಲೆಯ ಮಡೇನೂರಿನಲ್ಲಿ ೫೦ ಎಕರೆ ಭೂ ಪ್ರದೇಶದಲ್ಲಿ ಸ್ಥಾಪಿಸಿದ ಈ ಉದ್ಯಾನ ೨೦೦೭ ರಿಂದ ಕಾರ್ಯಾರಂಭಿಸಿದೆ.  ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ತರಬೇತಿ, ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿಗಾಗಿ, ಸಂಶೋಧನೆಯಲ್ಲಿ ಈ ಉದ್ಯಾನದಲ್ಲಿ ತೊಡಗಿದೆ.  ಮಂಡಳಿಯ ಆರ್ಥಿಕ ನೆರವಿನೊಂದಿಗೆ ೨,೦೩೯ ಗ್ರಾಮಗಳಲ್ಲಿ ೧,೦೪೧ ತರಬೇತಿಗಳನ್ನು ಆಯೋಜಿಸುವ ಮೂಲಕ ೪೪೦ ಜೈವಿಕ ಇಂಧನ ಬೆಳೆ ಬೆಳೆಯುವ ಹಾಗೂ ಬೀಜ ಸಂಗ್ರಹಿಸುವ ರೈತರ ಸಂಘಗಳನ್ನು ರಚಿಸಿದೆ.  ಗ್ರಾಮದ ಪ್ರತಿ ರೈತರನ್ನು ಜೈವಿಕ ಇಂಧನ ಸಸಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡು ೭೦ ಗ್ರಾಮಗಳನ್ನು ಸಂಪೂರ್ಣ ಜೈವಿಕ ಇಂಧನ ಗ್ರಾಮಗಳೆಂದು ಪರಿವರ್ತಿಸಲಾಗಿದೆ.

P-2

ಜೈವಿಕ ಇಂಧನ ಉದ್ಯಾನದಿಂದ  ರಚಿಸಿದ ರೈತರ ಸಂಘಗಳಿಂದ ವ್ಯವಸ್ಥಿತ ರೀತಿಯಲ್ಲಿ ರೈತರಿಗೆ ನ್ಯಾಯಯುತ ಬೆಲೆ ನೀಡುವ ಮೂಲಕ ಬೀಜ ಸಂಗ್ರಹಿಸಿ, ಸಂಸ್ಕರಿಸಿದ ಎಲ್ಲಾ ಉಪ ಉತ್ಪನ್ನಗಳ ಪ್ರಯೋಜನ ಪಡೆದ ರೈತರು ಆರ್ಥಿಕ ಅಭಿವೃದ್ಧಿ ಕಾಣುತ್ತಿದ್ದಾರೆ.  ಜೈವಿಕ ಇಂಧನ ಉದ್ಯಾನದಿಂದ ಹಲವಾರು ವಿಸ್ತರಣಾ ಚಟುವಟಿಕೆಗಳಲ್ಲದೇ ಕಾರ್ಯಾಗಾರ, ತರಬೇತಿ, ಪ್ರದರ್ಶನ, ಪ್ರಾತ್ಯಕ್ಷಿಕೆಗಳಲ್ಲದೇ ಈ ಕೇಂದ್ರದಿಂದ ಉನ್ನತ ಮಟ್ಟದ ಸಂಶೋಧನಾ ಕಾರ್ಯಗಳನ್ನೂ ಸಹ ಕೈಗೊಳ್ಳಲಾಗುತ್ತಿದೆ.  ಅವುಗಳ ಪೈಕಿ ಕೆಳಗಿನವುಗಳು ಪ್ರಮುಖವಾಗಿವೆ.

i. ಉನ್ನತ ಇಳುವರಿ ಹೊಂದಿದ ತಾಯಿ ಮತಗಳ ಸರ್ವೇಕ್ಷಣೆ ಹಾಗೂ ದಾಖಲಾತಿ ಮಾಡುವುದು- ರಾಜ್ಯದ ಸುಮಾರು ೮ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಸರ್ವೇಕ್ಷಣೆ ನಡೆಸಿ ೧೦೦೦ ಶ್ರೇಷ್ಠ ತಾಯಿ ಮರಗಳನ್ನು ಗುರುತಿಸಿ ದಾಖಲಿಸಿದೆ.

ii. ಶ್ರೇಷ್ಠ ತಳಿಗಳ ಸಂರಕ್ಷಣೆ ಹಾಗೂ ಕಸಿ ಕಟ್ಟಿದ ಸಸಿಗಳ ಮೂಲಕ ಅಧಿಕ ಸಸಿಗಳ ನೆಡುತೋಪು ಬೆಳೆಸುವಿಕೆ.

iii. ರೋಗ ನಿರೋಧಕ ತಳಿಗಳ ಅಭಿವೃದ್ಧಿ.

iv. ಜೈವಿಕ ಇಂಧನ ತಳಿಗಳ ಅನುವಂಶೀಯ ವ್ಯತ್ಯಾಸದ ವಿಶ್ಲೇಷಣೆ.

v. ವಿವಿಧ ಜೈವಿಕ ಇಂಧನ ಬೀಜಗಳಿಂದ ಡೀಸೆಲ್ ಉತ್ಪಾದನೆ.

vi. ಜೈವಿಕ ಇಂಧನ ಉದ್ಯಮಕ್ಕೆ ಅಗತ್ಯವಿರುವ ತೈಲೋತ್ಪಾದನೆ ಹಾಗೂ ಡೀಸೆಲ್ ಉತ್ಪಾದನಾ ಉಪಕರಣಗಳ ಅಭಿವೃದ್ಧಿ.

vii. ಹಿಂಡಿಯ ಬಳಕೆಯಿಂದ ಜೈವಾನಿಲ ಉತ್ಪಾದಿಸುವುದು.

viii. ಸಿಹಿ ಜೋಳದಿಂದ ಎಥೆನಾಲ್ ಉತ್ಪಾದನೆ.

ix. ಟಿಶ್ಯು ಕಲ್ಚರ್ ವಿಧಾನದಿಂದ ಜೈವಿಕ ಇಂಧನ ಸಸ್ಯಾಭಿವೃದ್ಧಿ.

P-3

೨. ಜೈವಿಕ ಇಂಧನ ಉದ್ಯಾನ ತಿಂತಿಣಿ, ಯಾದಗಿರಿ ಜಿಲ್ಲೆ : ಈ ಜೈವಿಕ ಇಂಧನ ಉದ್ಯಾನದಿಂದ ಹಾಸನ ಜಿಲ್ಲೆಯ ರೈತರಿಗೆ ಅಧಿಕ ಲಾಭವಾಗಿ ಜೈವಿಕ ಇಂಧನ ಚಟುವಟಿಕೆ ಬೆಳೆಯಲು ಬಹು ಪ್ರಯೋಜನಕಾರಿ ಎನಿಸಿದೆ.  ಇದರಿಂದ ಪಡೆದ ಅನುಭವದ ಆಧಾರದ ಮೇಲೆ ರಾಜ್ಯದ ಇತರ ಭಾಗಗಳಲ್ಲಿ ಇಂತಹ ಉದ್ಯಾನವನಗಳನ್ನು ನಿರ್ಮಿಸುವುದು ಅಗತ್ಯವೆಂದು ಮಂಡಳಿ ಭಾವಿಸಿ ರಾಜ್ಯದ ಉತ್ತರ ಕರ್ನಾಟಕದ ಜಿಲ್ಲೆಗಳ ಅನುಕೂಲಕ್ಕಾಗಿ ೨ನೇ ಜೈವಿಕ ಇಂಧನ ಉದ್ಯಾನ ನಿರ್ಮಿಸುವ ಕಾರ್ಯ ಮಂಡಳಿ ಕೈಗೆತ್ತಿಕೊಂಡಿದೆ.  ಈ ಉದ್ದೇಶಕ್ಕಾಗಿ ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ವ್ಯಾಪ್ತಿಗೊಳಪಡುವ  ಯಾದಗಿರಿ ಜಿಲ್ಲೆಯ ತಿಂತಿಣಿಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಗೆ ಸೇರಿದ ೪೨ ಎಕರೆ ಭೂ ಪ್ರದೇಶದಲ್ಲಿ ಜೈವಿಕ ಇಂಧನ ಉದ್ಯಾನ ನಿರ್ಮಿಸುವ ಕಾರ್ಯಕ್ಕೆ ಮಂಡಳಿ ಚಾಲನೆ ನೀಡಿದೆ.

೩. ಜೈವಿಕ ಇಂಧನ ಉದ್ಯಾನ, ಧಾರವಾಡ: ಕೃಷಿ ವಿಶ್ವ ವಿದ್ಯಾಲಯ, ಧಾರವಾಡದಲ್ಲಿ ರಾಜ್ಯದ ಮೂರನೇ ಜೈವಿಕ ಇಂಧನ ಉದ್ಯಾನದ ನಿರ್ಮಾಣಕ್ಕಾಗಿ ಮಂಡಳಿಯಿಂದ ಕಾರ್ಯಪ್ರಾರಂಭಿಸಿದೆ.  ಇದರ ಪ್ರಯೋಜನ ಉತ್ತರ ಕರ್ನಾಟಕದ ವಾಯುವ್ಯ ಭಾಗದ ಜಿಲ್ಲೆಯ ರೈತರಿಗೆ, ಸಾರ್ವಜನಕರಿಗೆ, ವಿಧ್ಯಾರ್ಥಿಗಳಿಗೆ ಲಭಿಸಲಿದೆ.

ಈ ಜೈವಿಕ ಇಂಧನ ಉದ್ಯಾನಗಳು ರಾಜ್ಯದ ಇತರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳಿಗೆ ತಾಂತ್ರಿಕ ನೆರವನ್ನು ನೀಡುವುದರೊಂದಿಗೆ ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಸಮಗ್ರ ಚಟುವಟಿಕೆಗಳ ಅಭಿವೃದ್ಧಿಗೆ ಸಹಾಯಕಾರಿಯಾಗಲಿವೆ.